ಯತಿ ಸ್ವಂತೀ -161
10-06-2018
ಒಂದೆರಡು ತಿಂಗಳುಗಳ ನಂತರ ಒಂಟಿತನ ಅಭ್ಯಾಸ ಆಯಿತು.
ಶಿವಶಂಕರ್ ಒಮ್ಮೆ ನಮ್ಮನ್ನು ಲಾಲ್ಬಾಗ್‍ಗೆ ಹೋಗಿ ಅಲ್ಲಿನ ಮರಗಳ ಮೇಲಿನ ಫಲಕಗಳಲ್ಲಿ ಬಟಾನಿಕಲ್ ಹೆಸರುಗಳನ್ನು ಬರೆದು ತನ್ನಿ ಎಂದಿದ್ದರು.
ನನಗೆ ಬಿ ಕೆ ಅರುಣ್ ಕುಮಾರ್ ಗೆಳೆಯನಾದ. ಅವನು ಒಂಬತ್ತನೇ ಬ್ಲಾಕ್‌ನಲ್ಲಿದ್ದ.
ಅವನೊಂದಿಗೆ ನಾನು ಅನೇಕ ಸಿನಿಮಾಗಳನ್ನು ನೋಡಿದೆ.
ನಂದಾ ಟಾಕೀಸ್, ಶಾಂತಿ ಟಾಕೀಸ್ ನಮ್ಮ ಫೇವರಿಟ್ ಅಡ್ಡಾಗಳು. (ಈಗ ಎರಡೂ ಇಲ್ಲ).
ಹೇಮಾ ಮಾಲಿನಿ ದ್ವಿಪಾತ್ರದಲ್ಲಿ ನಟಿಸಿದ ಸೀತಾ ಔರ್ ಗೀತಾ ನೋಡಿ ಥ್ರಿಲ್. ಭಲೇಜೋಡಿ ಚಿತ್ರದ ಮತ್ತೊಂದು ರೂಪ.
ರಾಂಪುರ್ ಕಾ ಲಕ್ಷ್ಮಣ್ ನೋಡಿದ ನೆನಪಿದೆ. ಹೋ ಘುಂ ಹೈ ಕಿಸೀಕೆ ಪ್ಯಾರ್ ಮೇ ದಿಲ್ ಸುಬಹ್ ಔರ್ ಶಾಮ್... ಫರ್ಯಾಲಳ ಸಾವಲ ರಂಗ್ ಹೈ ಮೇರಾ ರೇಷಮಿ ಅಂಗ್ ಹೈ ಮೇರಾ ಕ್ಯಾಬರೆ ನೃತ್ಯ ನೋಡಿ ಮನದಲ್ಲೇ ನಗು. ವಯಸ್ಸು ಹದಿನೈದು ದಾಟಿ ಶೋಡಷದತ್ತ ದಾಪುಗಾಲು ಹಾಕುತ್ತಿತ್ತು.
ದ ಸೌಂಡ್ ಆಫ್ ಮ್ಯೂಸಿಕ್ ರೀ ರನ್ ನೋಡಿದೆ ಅರುಣ್ ಜೊತೆ. ಅದಕ್ಕೆ ಹಿಂದೆ ಬೇಬಿ ಎಲಿಫೆಂಟ್ ರೆಕಾರ್ಡ್ ಇದ್ದ ಪ್ರಾಣಿಗಳ ಚಿತ್ರ ಹಟಾರಿ ನೋಡಿದ್ದೆ.
ಅರುಣ್ ವಿವರಿಸುತ್ತಿದ್ದ. ಸೋ ನನಗೆ ಆ ಸಿನಿಮಾ... ಅದರ ನಾಯಕಿ ಜ್ಯೂಲಿ ಆ್ಯಂಡ್ರೂಸ್... ಹಾಡುಗಳು ಸಖತ್ ಇಷ್ಟ... ಇಂದಿಗೂ.
ನನ್ನ ಸೋದರಮಾವನ ಬಳಿ ಜೇಮ್ಸ್ ಹ್ಯಾಡ್ಲಿ ಛೇಸ್ ಕಾದಂಬರಿ ಮಿಶನ್ ಟು ವೆನಿಸ್ ನೋಡಿದ್ದೆ. ಅದರ ಹಿಂದಿನ ರಕ್ಷಾಪುಟದಲ್ಲಿ 'ಡೆತ್ ಲರ್ಕ್ಸ್ ಇನ್ ದಿ ಕೆನಾಲ್ಸ್ ಆಫ್ ವೆನಿಸ್ ಅಂತ ಇತ್ತು. ಅಂದಿನಿಂದ ಅದನ್ನು ಓದೋ ಆಸೆ. ಆದರೆ ನನಗೆ ನನ್ನ ಹೈಸ್ಕೂಲ್ ಪಾಠ ಬಿಟ್ಟರೆ ಬೇರೆ ಇಂಗ್ಲಿಷ್ ಬರದು.
ಆ ಸಮಯದಲ್ಲಿ ಒಂದು ಐಕಾನಿಕ್ ಕನ್ನಡ ಸಿನಿಮಾ ಬಂತು. ಅದರ ನಟ ಪ್ರಖ್ಯಾತ ಆಗಿ ಬಹಳ ವರ್ಷ ಇದ್ದರು.
ನನ್ನ ಮನದಲ್ಲಾಗ ಎರಡು ಅಭಿಲಾಷೆಗಳು ಹುಟ್ಟಿಕೊಂಡವು.
-0-0-0-0-0 -
Comments
Post a Comment