ಯತಿ ಸ್ವಂತೀ -160


09-06-2018

ಶಿವಶಂಕರ್ ನಮ್ಮನ್ನು ಮಾರೇನಹಳ್ಳಿ ಕೆರೆ ಅಂಗಳಕ್ಕೆ ಕರೆದೊಯ್ದರು.
ಅಲ್ಲಿ ನಮ್ಮ ಕಣ್ಣಿಗೆ ಕಂಡ ಗಿಡಗಳನ್ನೆಲ್ಲಾ ಸಾರ್‌ಗೆ ತೋರಿಸಿದೆವು. ಅವರು ಆ ಸಸ್ಯ ನಮಗೆ ತಿಳಿದಿರದಿದ್ದರೆ ವಿವರಿಸುತ್ತಿದ್ದರು. ಮಾರೇನಹಳ್ಳಿ ಕೆರೆ ಅಂಗಳ ಇಂದು ಜೆಪಿ ನಗರ ಆಗಿದೆ.
ಜಯನಗರ ನಾಲ್ಕನೇ ಟಿ ಬ್ಲಾಕ್ 18ನೇ ಮುಖ್ಯ ರಸ್ತೆಯಲ್ಲಿ ಮಾರಮ್ಮನ ಗುಡಿಯೇ ಕೊನೆ. ಅದರಾಚೆ ಏನೂ ಇರಲಿಲ್ಲ. ಈಗ ಜಿ ಎನ್ ಆರ್ ಮತ್ತು ಕೃಷ್ಣ ಕಲ್ಯಾಣ ಮಂಟಪಗಳು ಅದರಾಚೆ ರಾಗಿಗುಡ್ಡಕ್ಕೆ ರಸ್ತೆ ಇದೆ. ಸಿಟಿ ಸೆಂಟರ್ ಇರುವ ರಸ್ತೆ.
ಬೆಂಗಳೂರಿಗೆ ಬಂದ ಹೊಸತರಲ್ಲಿ ನನಗೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಹದಿನಾರನೇ ಮುಖ್ಯ ರಸ್ತೆಯ ನಲವತ್ತು ಬೈ ಅರವತ್ತರ ಮನೆಯ ಮುಂದಿನ ದೊಡ್ಡ ರೂಮಿನಲ್ಲಿ ಒಂಟಿ ಬದುಕು. ಆಂಟಿ ಅಂಕಲ್ ರೂಂ ಹಾಲ್‍ನ ಆಚೆಗಿತ್ತು. 
ಮೈಸೂರು ರೈಲ್ವೆ ಲೋಕೋ ಕಾಲೋನಿ ಮನೆಯ ಬಳಿ ರಾತ್ರಿ ಪೂರಾ ಕೂ ಝಗ್ ಝಗ್ ಕೇಳುತ್ತಾ ಮಲಗುತ್ತಿದ್ದವ ನಾನು. ಈಗ ಬಸ್ ಕಾರುಗಳ ಭರೋ ಭರೋ ಸದ್ದು. ಹಳೆಯ ಪುಷ್ಪಕ ವಿಮಾನ ಚಿತ್ರದ ಕಮಲ್ ಹಾಸನ್ ಅವನ ಹಳೆಯ ಪುಟ್ಟ ಮನೆಯ ಪಕ್ಕದ ಥಿಯೇಟರಿನಲ್ಲಿ ಕೇಳಿಸುತ್ತಿದ್ದ ಸದ್ದುಗದ್ದಲಗಳನ್ನು ಧ್ವನಿಮುದ್ರಿಸಿಕೊಂಡು ಪಂಚತಾರಾ ಹೊಟೇಲ್‌ನಲ್ಲಿ ಮಲಗುವ ದೃಶ್ಯ ಕಂಡಾಗ ನನಗೆ ನನ್ನ ಪಿಯುಸಿ ಆರಂಭದ ಆಂಟಿ ಮನೆಯ ಒಂಟಿವಾಸ ನೆನಪಾಗಿದ್ದು ಅಚ್ಚರಿಯೇನಲ್ಲ. 
                      -0-0-0-0-0 -

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102