ಯತಿ ಸ್ವಂತೀ -159


08-06-2018

ಎಚ್ ಎಸ್ ರಾಘವೇಂದ್ರ ರಾವ್ ಮತ್ತು ಕೆ ಎಲ್ ಗೋಪಾಲಕೃಷ್ಣಯ್ಯ ಕನ್ನಡ ತರಗತಿಗೆ ಬರುತ್ತಿದ್ದರು. ಪಾಠ ಕೇಳುವ ಸಮಯದಲ್ಲಿ ಮೇಲೆ ಶೀಟ್ ಹೊದೆಸಿದ್ದ ತರಗತಿಯಲ್ಲಿ ಗುಬ್ಬಚ್ಚಿಗಳು ಚೀಂವ್ ಚೀಂವ್ ಎಂದು ಶಬ್ದಿಸುತ್ತಾ ನಮ್ಮ ಮೇಲೇ ಹಾರಾಡುತ್ತಿದ್ದವು. ಪಾಠ ಕೇಳ್ತೀರಾ ಇಲ್ಲಾ ಅವುಗಳನ್ನ ನೋಡ್ತಾ ಕೂತ್ಕೋತೀರಾ ಅಂತ ಮೇಷ್ಟ್ರು ಗದರುತ್ತಿದುದು ನೆನಪಿದೆ. ಕೆ ಎಲ್ ಜಿ ಪ್ರಭುಲಿಂಗ ಲೀಲೆ ಪಾಠ ಮಾಡುವಾಗ 'ಕಾಮಲತೆ ನೆರೆದಳ್ ನೆರೆದಳಮ್ಮಮ್ಮ' ಎಂದಾಗ ಕಿಸಕ್ (ಹುಡುಗರು) ಮುಸಿಮುಸಿ (ಹುಡುಗೀರು) ನಕ್ಕ ನೆನಪಿದೆ!
ಫಿಸಿಕ್ಸ್ ಪಾಠಕ್ಕೆ ವಿ ಶ್ರೀನಿವಾಸನ್ ಮತ್ತು ಎಚ್ ಆರ್ ಕೃಷ್ಣಮೂರ್ತಿ.
ಕೆಮಿಸ್ಟ್ರಿಗೆ ಕೆ. ವಿ. ಘನಶ್ಯಾಂ ಮತ್ತು ಗೀತಾಂಜಲಿ. ಲ್ಯಾಬ್‌ನಲ್ಲಿ ವಳ್ಳಿ ಇದ್ದರು.
ಬಯಾಲಜಿಗೆ ಬಿ. ಶಿವಶಂಕರ್. ಮ್ಯಾಥ್ಸ್‌ಗೆ ಸುಂದರೇಶ್.
ನನ್ನ ನೆನಪಿರುವ ಮಟ್ಟಿಗೆ ಇವರುಗಳಿದ್ದರು. ಹ್ಞಾಂ ಇಂಗ್ಲಿಷ್‌ಗೆ ಎಸ್ ಆರ್ ಸ್ವಾಮಿ ಮತ್ತು ಅವರ ಪತ್ನಿ ಇಂದಿರಾ.
ಎಚ್ ಎಸ್ ಆರ್... ಕೆವಿಜಿ... ಎಚ್ ಆರ್ ಕೆ.. ಬಿ ಎಸ್.. ಈ ನಾಲ್ವರಿಗೂ ಬಹುಶಃ ಮೊದಲ ಉದ್ಯೋಗ ಇರಬಹುದು. ಸುಮಾರು ಅರ್ಲೀ ಟ್ವೆಂಟಿ ವಯಸ್ಸು ನಾಲ್ವರದೂ.
ನಮಗಿಂತ ಎಂಟೊಂಬತ್ತು ವರ್ಷ ದೊಡ್ಡವರು
ಬಹಳ ಎಂಜಾಯ್ ಮಾಡಿದ್ವಿ ಇವರುಗಳ ತರಗತಿಗಳನ್ನು.
ಎಚ್ ಆರ್ ಕೆ ಕೊಳಲು ನುಡಿಸಿದ್ದರು ಒಮ್ಮೆ. ಅದಕ್ಕೆ ಕೆವಿಜಿ ತಬಲಾ.
ಆಮೇಲೆ ಎಚ್ ಆರ್ ಕೃಷ್ಣಮೂರ್ತಿ ಆಕಾಶವಾಣಿಗೆ ಉದ್ಯೋಗಕ್ಕೆ ಹೋದರೆಂದು ನೆನಪು. ಅನೇಕ ಲೇಖನಗಳನ್ನು ಕೂಡ ಬರೆದಿದ್ದಾರೆ.
ಕೆಮಿಸ್ಟ್ರಿ ಲ್ಯಾಬ್ ನನ್ನ ಫೇವರಿಟ್ ಜಾಗ. ಕೆಲವು ಉಪ್ಪುಗಳನ್ನು 'ಬ್ರೇಕ್' ಮಾಡಿ ಅದರ ಆ್ಯಸಿಡ್ ಮತ್ತು ಬೇಸ್ ಕಂಡು ಹಿಡಿಯೋ ಕೆಲಸ.
ಜೂವಾಲಜಿ ಲ್ಯಾಬ್‌ನಲ್ಲಿ ಕಪ್ಪೆಯನ್ನು ಕತ್ತರಿಸಿ ಅದರ ಹೃದಯದ ಬಡಿತ ನೋಡಿದ್ದು ಜ್ಞಾಪಕ.
                          -0-0-0-0-0 -

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102