ಯತಿ ಸ್ವಂತೀ -157
06-06-2018
ಹತ್ತನೇ ತರಗತಿಗೆ ಬರುವ ವೇಳೆಗೆ ಟಿ ಕೆ ರಾಮರಾವ್ ಅವರ ಬಂಗಾರದ ಮನುಷ್ಯ ಓದಿದ್ದೆ. ಅಣ್ಣಾವ್ರು ಆ ಪಾತ್ರ ಮಾಡ್ತಾರೆ ಅಂತ ತಿಳಿದು ಖುಷಿ ಆಯಿತು.
1972 ಮಾರ್ಚ್ 31ರಂದು ಬಂಗಾರದ ಮನುಷ್ಯ ಬಿಡುಗಡೆ ಆಯಿತು. ಅದೇ ದಿನ ಹಿಂದಿ ನಟಿ ಮೀನಾಕುಮಾರಿ ಮರಣಿಸಿದಳು. ಆಕೆ ನಟಿಸಿದ .
ಪಾಕೀಝಾ ಸಿನಿಮಾ ನನಗೆ ನೆನಪಿರುವ ಮಟ್ಟಿಗೆ ನಾನು ಹುಟ್ಟಿದ ವರ್ಷ ಆರಂಭವಾಗಿರಬೇಕು. ಏಕೆಂದರೆ 1957ರ ಒಂದು ರೀಡರ್ಸ್ ಡೈಜೆಸ್ಟಿನಲ್ಲಿ ಲಕ್ಸ್ ಜಾಹೀರಾತಿಗೆ ಮೀನಾಳ ಪಟ ಹಾಕಿ ಸ್ಟಾರ್ ಆಫ್ ಪಾಕೀಝಾ ಅಂದಿದ್ದರು. ಬಹುಶಃ ನಿರ್ದೇಶಕ ಮತ್ತು ನಾಯಕಿ ನಡುವೆ (ಅವರು ಪತಿ ಪತ್ನಿ ಇರಬೇಕು) ಜಗಳ ಆಗಿ ಆ ನಂತರ ಒಂದಾಗಿ ಸಿನಿಮಾ ಮುಗಿಸಿದರಂತೆ. (ಆರಂಭ - 18 ಜನವರಿ 1958 ಬಿಡುಗಡೆ - 4 ಫೆಬ್ರುವರಿ 1972).
ಅದು ಮೀನಾಕುಮಾರಿಯ ಸಾವಿನ ಸಿಂಪಥಿಯಿಂದಲೋ, ಕಥೆಯಿಂದಲೋ, ಸುಮಧುರ ಹಾಡುಗಳಿಂದಲೋ ಸೂಪರ್ ಹಿಟ್ ಆಯಿತು.
ಬಂಗಾರದ ಮನುಷ್ಯ ಸಿನಿಮಾ ಕಾದಂಬರಿಯನ್ನು ಪೂರ್ಣವಾಗಿ ತೆಗೆದುಕೊಂಡಿಲ್ಲ ಎಂಬ ಬೇಸರಕ್ಕೆ ಆ ಸಿನಿಮಾ ನೋಡಲಿಲ್ಲ.
ಆದರೆ ಬಂಗಾರದ ಮನುಷ್ಯ ಓಡುತ್ತಲೇ ಓಡುತ್ತಲೇ ಓಡುತ್ತಲೇ ಇತ್ತು.
ನನ್ನ ಪರೀಕ್ಷೆ ಏಪ್ರಿಲ್ 17ರಿಂದ ಏಪ್ರಿಲ್ 22 ನಡೆದ ನೆನಪು.
ನನಗೆ ಒಂದು ಥ್ರಿಲ್ ಇತ್ತು.
ನನ್ನ ಮುಂದಿನ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ಎಂದು!
Comments
Post a Comment