ಯತಿ ಸ್ವಂತೀ -155
04-06-2018
ಅಯ್ಯ ಅಮ್ಮ ಮತ್ತು ನಾವು ಅಂದರೆ ನಾನು ನನ್ನ ಇಬ್ಬರು ತಂಗಿಯರು ಹೋದ ಒಂದೇ ಟೂರ್ ಬಹುಶಃ ಮದ್ರಾಸ್ ಮತ್ತು ನಾಗಪುರ್.
ಮೈಸೂರು ಬೆಂಗಳೂರು ನಡುವೆ ಬಹಳ ಸಲ ಓಡಾಡಿದ್ದೇವೆ. ಆದರೆ ಸ್ವಲ್ಪ ಲಾಂಗ್ ಟೂರ್ ಇದೊಂದೇ ಇರಬೇಕು.
ಮದ್ರಾಸ್ ಸ್ಟೇಶನ್‌ಗೆ ಮೊದಲು ಪೆರಂಬೂರ್ ಎನ್ನುವ ಸ್ಟೇಶನ್ ಇದೆ. ಅಲ್ಲಿ ಇಳಿದೆವು. ಅಮ್ಮನ ಬಾಲ್ಯ ಗೆಳತಿ ಸುಶೀಲ ಅವರ ಪತಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗದಲ್ಲಿ ಇದ್ದರು. ಅವರ ಮನೆಗೆ ಹೋದೆವು.
ಅಮ್ಮನನ್ನು ನೋಡಲು ಆಗೆಲ್ಲಾ ಅನೇಕ ಬಾರಿ ಮೈಸೂರಿಗೆ ಸುಶೀಲಾ ಆಂಟಿ ಬಂದಿದ್ದ ನೆನಪಿದೆ.
ಅವರ ಮನೆಯ ಮುಂದೆ ತೆಗೆಸಿಕೊಂಡ ನಾವು ಮೂವರ ಪಟ ಇದೆ. ಅಯ್ಯ ತೆಗೆದದ್ದು. ಬೇರೇನೂ ನೆನಪಿಲ್ಲ.
ಅಲ್ಲಿಂದ ಜಿ. ಟಿ. ಎಕ್ಸ್‌ಪ್ರೆಸ್‌ನಲ್ಲಿ ನಾಗಪುರ್‌ಗೆ ಹೋದೆವು. ಅಲ್ಲಿ ನನ್ನ ತಂದೆಯ ಕಸಿನ್ ಇದ್ದರು. ಅವರೂ ನಮ್ಮಂತೆಯೇ ವೀರಾಂಬುಧಿ ಸರ್‌ನೇಂ ಇರುವವರು.
ನಮ್ಮ ಚಿಕ್ಕಪ್ಪ ನಾಗಪುರದ ಸಿಫೇರಿ (ನೀರಿ)ಯಲ್ಲಿ ಸಸ್ಯಶಾಸ್ತ್ರದ ವಿಜ್ಞಾನಿ ಆಗಿದ್ದರು. ಅವರ ಪತ್ನಿ, ಒಬ್ಬ ಮಗ, ಅವನಿಗಿಂತ ಚಿಕ್ಕವರಾದ ಮೂವರು ಹೆಣ್ಮಕ್ಕಳು.
ಕೆಲವು ಪಟಗಳು ಇವೆ. ಅದರಿಂದ ನನಗೆ ಅಲ್ಲಿ ಹೋದೆವೆಂಬ ಜ್ಞಾಪಕವಿದೆ.
ಅವರೆಲ್ಲ ನಂತರ ಬೆಂಗಳೂರಿಗೆ ಬಂದುಬಿಟ್ಟರು. ಈಗಲೂ ನಮ್ಮ ಕುಟುಂಬಗಳ ನಡುವೆ ಪ್ರೀತಿಯ ಅನುಬಂಧವಿದೆ.
ಅಯ್ಯ ಬಿಹಾರದ ಮುಂಘೈರ್ ಎನ್ನುವ ಊರಲ್ಲಿ ರೈಲ್ವೆ ತರಬೇತಿಗೆ ಹೋಗಿದ್ದರು. ಅದರ ಬಳಿಯ ಸೀತಾಕುಂಡ್ ಎನ್ನುವ ಜಾಗದಲ್ಲಿ ಬಿಸಿನೀರ ಬುಗ್ಗೆ ಇದೆ ಎಂದಿದ್ದರು.
ನಾನು ಬಿಸಿನೀರ ಕೊಳ ಕಂಡದ್ದು ಕಾಶ್ಮೀರದ ಅನಂತ್ ನಾಗ್ ಪಟ್ಟಣದಲ್ಲಿ. 1987ರಲ್ಲಿ.
-0-0-0-0-0 -
Comments
Post a Comment