ಯತಿ ಸ್ವಂತೀ -154


03-06-2018

ಕೆಲವು ಘಟನೆಗಳು ಅನುಭವಿಸಲು ಚೆನ್ನಾಗಿರುತ್ತವೆ. ಬರೆಯಲು ಮುಜುಗರ. ಕೆಲವು ತುಂಟ ಹುಡುಗರು ಮೇಡಮ್‌ಗಳ ಬಳಿ ಆಡಿದ್ದನ್ನು ನೆನೆದರೆ ರವಿಚಂದ್ರನ್ ಸಂಗೀತ ನಿರ್ದೇಶನದ ತುಂಟ ಹಾಡು ನೆನಪಾಗುತ್ತದೆ😉 ಯಾವುದದು ಹಾಡು? 🤔 
ಕನ್ನಡ ಮೇಷ್ಟ್ರು ರಾಘವಾಚಾರ್ ನಂತರ ಪಿಯುಸಿಯಲ್ಲಿ ರಾಘವೇಂದ್ರ ರಾವ್... ಒಟ್ಟಿನಲ್ಲಿ ರಾಘವ ಎನ್ನುವ ಹೆಸರು ನನ್ನ ಕನ್ನಡ ಕಲಿಕೆಗೆ ಪ್ರಥಮ ಬುನಾದಿ ಹಾಕಿದರು.
ಪರೀಕ್ಷೆ ಹತ್ತಿರ ಬಂದಿತು. ಯಥಾಪ್ರಕಾರ ಜನವರಿಯಲ್ಲಿ ಅಜ್ಜೀ ಮನೆ ವಾಸಿಯಾಗಿದ್ದೆ. 
ನಮ್ಮ ಆ ಅಜ್ಜಿ ಮಡಿ. ಅವರ ಕಸಿನ್ ಸಿಸ್ಟರ್ ಮನೆ... ಅವರಷ್ಟೇ ವಯಸ್ಸಿನೋರು... ಅವರ ಮನೆಯಲ್ಲಿನ ಬಾವಿಯಿಂದ ನೀರು ತರುತ್ತಿದ್ದರು ಅವರ ಅಡುಗೆಗೆ. ಅವರ ಬೆಳ್ಳಿ ಚೊಂಬು ರಕ್ಷಕನಂತೆ ಕೆಲವು ದಿನಗಳು ಹೋಗಿದ್ದುಂಟು. ಸುಮಾರು ಮೂರು ಫರ್ಲಾಂಗ್ ದೂರ. 
ಆ ಚಿಕ್ಕಜ್ಜಿ ಬಹಳ ಕಾಮಿಕಲ್. ಮುಖದ ಮೇಲೆ ಎಷ್ಟು ಮುದುರುಗಳಿದ್ದುವೆಂದರೆ ಆಗೆಲ್ಲಾ ನನ್ನ ಬಳಿ ಕ್ಯಾಮೆರಾ ಇರಲಿಲ್ಲ ಎಂದು ಬೇಸರ ಆಗುತ್ತದೆ. 
ಎಂಟನೇ ಕ್ರಾಸ್ ಐದನೇ ಮೆಯ್ನ್‌ನ ಮೂಲೆಯಲ್ಲಿ ಅಂಬಾ ಭವನ ಇದ್ದಿದ್ದು ನೆನಪಿದೆ. 
ಗಣೇಶನ ಹಬ್ಬದ ಸಮಯದಲ್ಲಿ ಆರ್ಕೆಸ್ಟ್ರಾ ಇರುತ್ತಿತ್ತು. ವಿಶೇಷತಃ ಮೋಹನ್ ಕುಮಾರ್ ಅಂದರೆ ಥ್ರಿಲ್. 
ಮುಂದೆ ಕಿಲಾಡಿ ಕಿಟ್ಟು ಅನ್ನೋ ಸಾಹಸಸಿಂಹನ ಸಿನಿಮಾಗೆ ಸಂಗೀತ ನೀಡಿದ್ದರೆಂದು ಜ್ಞಾಪಕ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102