ಯತಿ ಸ್ವಂತೀ -153
02-06-2018
ಶ್ರೀಕಂಠರಾಯರ ಮಗ ರಾಮಕೃಷ್ಣ ಮ್ಯಾಥ್ಸ್ ತಗೋತಿದ್ದರು. ಯಾರಾದರೂ ಗಲಾಟೆ ಮಾಡಿದರೆ ಚಾಕ್ ಪೀಸ್ ಮುರಿದು ಅದರ ತುಂಡನ್ನು ತಮ್ಮ ಎಡಗೈಯಿಂದ ಎಸೆಯುತ್ತಿದ್ದರು. ಅವರು ಲೆಫ್ಟ್ ಹ್ಯಾಂಡರ್.
ಹುಡುಗರಿಗೆ ಇದರಿಂದ ಪ್ರಚಂಡ ಐಡಿಯಾ ಬಂತು. ಆಗ ಬರುತ್ತಿದ್ದ ಪಿಂಕ್ ಬಣ್ಣದ ಬಬ್ಬಲ್ ಗಂ ಅನ್ನು ಒಂದು ಬಟರ್ ಕಾಗದದಲ್ಲಿ ಸುತ್ತಿರುತ್ತಿದ್ದರು. ಅದನ್ನು ಕೆಲವು ಮಡಿಕೆ ಮಡಿಚಿ, ಆಂಗ್ಲ ಭಾಷೆಯ ವಿ ಶೇಪಿನಲ್ಲಿ ಬೆಂಡ್ ಮಾಡಿ ಬಾಯಲ್ಲಿ ರಬ್ಬರ್ ಬ್ಯಾಂಡ್ ಕಚ್ಚಿಕೊಂಡು ಈ ಕಾಗದವನ್ನು ಬಾಣದಂತೆ ಸೆಳೆದು ಬಿಟ್ಟರೆ ಯಾರಿಗೆ ಹೋಗಿ ತಾಕುತ್ತಿತ್ತೋ ಅವರಿಗೆ ಕೆಲವು ಕ್ಷಣಗಳ ಕಾಲ ಬಿಸಿ ಆಗುತ್ತಿತ್ತು. ನೋವು ಕೂಡ!
ಇದೊಂದು ಆಟವಾಯಿತು ತರಗತಿಯಲ್ಲಿ. ರಾಮಕೃಷ್ಣರ ಲೆಫ್ಟ್ ಹ್ಯಾಂಡ್ ಚಾಕ್ ಪೀಸ್ ಥ್ರೋ ಮತ್ತು ಇದು...
ಒಂದು ದಿನ ಹಿಡಿದರು. ಎಲ್ಲರನ್ನೂ ಚೆಕ್ ಮಾಡತೊಡಗಿದಾಗ ಆ ಬಟರ್ ಕಾಗದವನ್ನು ಪ್ಯಾಂಟಿನ ಫೋರ್ಕ್‌ನಲ್ಲಿ ಬೈತಿಟ್ಟರು ಹುಡುಗರು.
ಇನ್ನೊಮ್ಮೆ ಪುಟ್ಟ ಕಲ್ಲುಗಳನ್ನು ತರಗತಿಯಲ್ಲಿ ತೂರಾಡಿದರು ಹುಡುಗರು ಮೇಷ್ಟ್ರು ಇಲ್ಲದಾಗ. ತಲೆ ಬಗ್ಗಿಸಿ ಕೂತವನು ತಲೆ ಎತ್ತಿ ನಕ್ಕೆ.
ರೊಂಯ್ ಎಂದು ಬಂದ ಕಲ್ಲಿನ ಚೂರೊಂದು ನನ್ನ ಹಲ್ಲಿನ ಚೂರೊಂದು ಹೊರ ಬೀಳುವ ಹಾಗೆ ಮಾಡಿತ್ತು.
ಆಟ ಆಡಿಕೊಂಡೇ ಎಸ್ ಎಸ್ ಎಲ್ ಸಿ ಮುಟ್ಟಿದೆ...
Comments
Post a Comment