ಯತಿ ಸ್ವಂತೀ -152-
01-06-2018
ಹೈಸ್ಕೂಲಿನಲ್ಲಿ ಬಹಳವೇ ಗಲಾಟೆ ನಮ್ಮದು. ಸುರೇಶನ ಪೆನ್ ಕ್ಯಾಪ್ ಮೂಲಕ ಸಿಳ್ಳೆ ಕೇಳಿಸಿದಾಗ ಶ್ರೀಕಂಠರಾವ್ ಸರ್ ಕೆಂಡಾಮಂಡಲವಾದರು. ಇದು ಕೊನೆಯ ಬೆಂಚಿನೋರದ್ದೇ ಕರಾಮತ್ತು ಅಂತ ಹೊರಗೆ ಓಡಿಸಿದರು. ಒಂದು ಪೀರಿಯೆಡ್ ನಂತರ ಕ್ಷಮೆ ಕೇಳಿ, ಈಗ ಕೂಲ್ ಆಗಿದ್ದ ಸರ್ ಒಳಗೆ ಸೇರಿಸಿದರು.
ಶಶಿ ಅಂತ ಒಬ್ಬ ಸಹಪಾಠಿ. ಒಮ್ಮೆ ತನ್ನ ಕ್ಯಾಪ್ ಉಲ್ಟಾ ಹಿಡಿದು ಅಮ್ಮಾ ತಾಯಿ ಎಂದ.
ಒಬ್ಬ ಅವನನ್ನು ಪಿಚ್‌ಕಾರ ಅಂದ. ಅವನಿಗೆ PICH ಅನ್ನೋ ಹೆಸರು ಬಂತು.
ಒಬ್ಬ ಹುಡುಗ ತನ್ನ ಇರೇಸರ್‌ನಲ್ಲಿ ತನ್ನ ಕೈ ಚಳಕ ತೋರಿಸಿದ. PICH ಅಂತ ಇರೇಸರ್‌ನಲ್ಲಿ ರಬ್ಬರ್ ಸ್ಟ್ಯಾಂಪಿನಂತೆ ಕೆತ್ತಿದ. ಮತ್ತೊಬ್ಬ ಹುಡುಗ ಬೆಂಚೊಂದರ ಮೇಲೆ ದೊಡ್ಡದಾಗಿ PICH ಎಂದು ಕಾಣುವಂತೆ ಇಂಕ್ ಬಳಸಿ ಒತ್ತಿದ. ಆ ದೊಡ್ಡ PICHನಲ್ಲಿ ನೂರಾರು PICHಗಳು!
ವಿಜ್ಞಾನದ ಮೇಡಂ ಅನಸೂಯ ಕಣ್ಣಿಗೆ ಬಿತ್ತು ಅದು. ಉರಿದುಹೋದರು. ಮೊದಲು ಲಾಸ್ಟ್ ಬೆಂಚ್ ಸ್ಟ್ಯಾಂಡ್ ಅಪ್ ಆನ್ ದಿ ಬೆಂಚ್ ಅಂದರು. ಮೊದಲ ಬಲಿಪಶುಗಳು ಅವರೇ. ನಂತರ ನಾವೆಲ್ಲ ಅಂತ ಒಂದೊಂದೇ ಬೆಂಚಿನ ಹುಡುಗರು ಬೆಂಚಿನ ಮೇಲೆ ನಿಂತರು. ತಮಾಷೆಯೆಂದರೆ ಈ ಗಲಾಟೆಯಲ್ಲೂ ನಾನು ಸ್ಟುಡ್ ಅಪ್ ಆನ್ ದ ಬೆಂಚ್ ಎಂದು ನೆನಪು.
-0-0-0-0-0 -
Comments
Post a Comment