ಯತಿ ಸ್ವಂತೀ -149


29-05-2018

ಅಜ್ಜಿ ಮನೆ...
ನಮ್ಮ ತಾಯಿಯವರ ತಂದೆ ನಮ್ಮ ತಾಯಿಯವರ ತಾಯಿಗಿಂತ ಹೆಚ್ಚು ಕಾಲ ಬದುಕಿದ್ದರೂ ಅವರ ಮನೆ ಅಂದರೆ ನಮಗೆ ಅಜ್ಜಿ ಮನೆ. 
ಒಂಟಿಕೊಪ್ಪಲ್ ಐದನೆಯ ಮುಖ್ಯ ರಸ್ತೆಯಲ್ಲಿತ್ತು ನಮ್ಮ ಅಜ್ಜಿ ಮನೆ. ದೊಡ್ಡ ಕಾಂಪೌಂಡ್. ಮಾವು ಹಲಸಿನ ಮರಗಳಿದ್ದವೆಂದು ನೆನಪು. ಸುತ್ತಲೂ ಜಾಗವಿತ್ತು. ಒಂದು ಕಡೆ ಹಸುಗಳನ್ನು ಸಾಕಿದ್ದರು. ಗಂಗಾ, ಯಮುನಾ, ಕಾವೇರಿ, ಗೋದಾವರಿ ಅನ್ನೋ ಹೆಸರಿನ ಹಸುಗಳು. ಹಸುಗಳು ಗಬ್ಬವಾಗಿ, ಅವು ಕರು ಹಾಕುವಾಗ ವೀಕ್ಷಿಸಿದ್ದೆವು. ಕರು ಹಸುವಿನಿಂದ ಹೊರಬಿದ್ದು ಏಳಲಾರದೇ ಎದ್ದು ಓಡಾಡಲು ನೋಡಿದ್ದು ಕಂಡು ಖುಷಿ ಪಟ್ಟಿದ್ದೆವು. ಗಿಣ್ಣು ಹಾಲು ಕುಡಿಯುವುದು, ಅದರಲ್ಲಿ ಮಾಡಿದ ಸಿಹಿ ತಿನ್ನುವುದು.. ಆಹಾ ಸಖತ್. 
ಕೋಳಿಗಳನ್ನು ಕೂಡ ಸಾಕಿದ್ದರು ನನ್ನ ಸೋದರಮಾವ. ಅವುಗಳ ಮೊಟ್ಟೆಗಳನ್ನು ಇನ್ಕುಬೇಟರ್‌ನಲ್ಲಿಟ್ಟು ದಿನವೂ ಪರ್ಯಾಯವಾಗಿ ಶಾಖ ನೀಡಲಾಗುತ್ತಿತ್ತು. ಒಂದು ರಾತ್ರಿ ಚೀಂವ್ ಚೀಂವ್ ಸದ್ದು ಕೇಳಿ ಓಡಿ ಹೋಗಿ ನೋಡಿದರೆ ಪುಟ್ಟ ಪುಟ್ಟ ಕೋಳಿಮರಿಗಳು ಮೊಟ್ಟೆಗಳನ್ನು ಒಡೆದು ಹೊರಬಂದು ಒಂದರ ಮೇಲೊಂದು ಬಿದ್ದು ಓಡಾಡುತ್ತಿದ್ದವು! ಎಂತಹ ರಮಣೀಯ ದೃಶ್ಯ! 
ಇವೆಲ್ಲವೂ ನನ್ನ ಚಿಕ್ಕಂದಿನ ನೆನಪಿನ ಸಂಪುಟದಲ್ಲಿ ಭದ್ರವಾಗಿ ಉಳಿದಿರುವ ಅಣಿಮುತ್ತುಗಳು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102