ಯತಿ ಸ್ವಂತೀ -146
26-05-2018
ತರಗತಿಯಲ್ಲಿ ಗಲಾಟೆ ಮಾಡುತ್ತಿದ್ದವನು ರಮೇಶ್. ವನಿತ್ ಮತ್ತು ಅರುಣ್ ಮಹಾ ತುಂಟರು. ಒಮ್ಮೆ ನಮ್ಮ ಎಸ್ ಡಿ ಮಿಸ್ ತರಗತಿ ಇತ್ತು. ಪಾಠದ ನಡುವೆ ಅರುಣ್ ಇದ್ದಕ್ಕಿದ್ದಂತೆ 'ನಿನ್ನೆ ನಿಮ್ಮನ್ನು ಗಣೇಶ ಟಾಕೀಸ್‌ನಲ್ಲಿ ನೋಡ್ದೆ ಮಿಸ್' ಅಂದ.
'ಹೌದಪ್ಪ ಮೆಕೆನಾಸ್ ಗೋಲ್ಡ್ ನೋಡಕ್ಕೆ ಹೋಗಿದ್ದೆ' ಎಂದರು.
ತುಂಟ ಅರುಣ್ ಬಹುಶಃ ಆಗ 14 ವರ್ಷದವನು. 'ಮಿಸ್ ಅಂಡರ್ ವಾಟರ್ ಸೀನ್ ಹೆಂಗಿತ್ತು ಮಿಸ್?' ಎಂದ. ಆಕಿ ಕೂಡ ಆಗ ಕುಮಾರಿ. ನಮಗಿಂತ ಕೆಲವು ವರ್ಷಗಳಿಂದ ದೊಡ್ಡವರಿದ್ದಾರು. ಮುಖ ಕೆಂಪಾಗಿ 'ಥೂ ಹೋಗಪ್ಪ ನೀನು ತುಂಬಾ ಕೆಟ್ಟ ಹುಡುಗ. ವೀಣಂಗೆ ಹೇಳ್ತೀನಿ 'ಅಂದರು! ವೀಣಾ ಅರುಣ್ ಅಕ್ಕ. ನಾವು ಒಂಬತ್ತನೇ ಕ್ಲಾಸು. ಅವಳು ಹತ್ತನೇ ಕ್ಲಾಸ್.
ಅಂಜನಕುಮಾರಿ ಬಯಾಲಜಿ ತಗೊಳ್ಳೋರು. ವಾಟ್ ಈಸ್ ಎ ಸೆಲ್ ಅನ್ನೋ ಪ್ರಶ್ನೆಗೆ ನಮ್ಮ ಸಹಪಾಠಿ ಒಬ್ಬ ಎ ಸೆಲ್ ಈಸ್ ಎ ಸೆಲ್ ಬಿಕಾಸ್ ಇಟ್ ಈಸ್ ಎ ಸೆಲ್ ದೇರ್‌ಫೋರ್ ಇಟ್ ಈಸ್ ಎ ಸೆಲ್. ಸಿನ್ಸ್ ಇಟ್ ಈಸ್ ಎ ಸೆಲ್ ಹೆನ್ಸ್ ಇಟ್ ಈಸ್ ಎ ಸೆಲ್ ಅಂತ ಬರೆದು ಅವರ ಹತ್ತಿರ ಸಿಗಾಕ್ಕೊಂಡು ಇಡೀ ತರಗತಿಗೆ ಸಹಸ್ರ ನಾಮಾರ್ಚನೆ ಆಗಿತ್ತು.
ಅಂಜನಕುಮಾರಿ ಹಾಡು ಎಂದಾಗ ಒಮ್ಮೆ ಜಯತು ಜಯ ವಿಠಲಾ ನಿನ್ನ ನಾಮವು ಹಾಡಿದ್ದೆ. ಇನ್ನೊಮ್ಮೆ ನಗುತ ಹಾಡಲೇ ಅಳುತ ಹಾಡಲೇ ಅಂತ ಹಾಡಿದಾಗ ಹುಡುಗರು ತಲೆ ಮೇಲೆ ಕೈ ಹೊತ್ತು ಕುಳಿತರು.
ಒಬ್ಬ ಮೇಷ್ಟರಿಗೆ ಕಿವಿ ಕೇಳುತ್ತಿರಲಿಲ್ಲ. ತುಂಟ ಹುಡುಗರು ಏ ಕೆಪ್ಪಾ ಅಂತ ಕಿರಿಚುತ್ತಿದ್ದರು. ಪುಣ್ಯವಶಾತ್ ಅವರಿಗೆ ಕೇಳಿಸುತ್ತಿರಲಿಲ್ಲ.
ಇನ್ನೊಮ್ಮೆ ಮತ್ತೊಬ್ಬ ಹುಡುಗ ಫೌಂಟೆನ್ ಪೆನ್ ಕ್ಯಾಪ್ ಒಳಗೆ ಉಫ್ ಎಂದ. ಅದು ಆ ಮೇಷ್ಟರ 'ಕಿವಿಗೆ' ಬಿದ್ದು ಬಿಟ್ಟಿತು. ಲಾಸ್ಟ್ ಬೆಂಚೇ ಇಂಥ ಚೇಷ್ಟೆ ಮಾಡೋದು ಅಂತ 'ಕ್ಲಾಸಲ್ಲಿ ವ್ಹಿಜಲ್ ಹಾಕ್ತೀರಾ ಗೆಟೌಟ್!' ಅಂತ ಕಿರಿಚಿದರು!
Comments
Post a Comment