ಯತಿ ಸ್ವಂತೀ -60


01-03-2018
ಅನೇಕ ಬಿರುದುಗಳಿರುವ ನನಗೆ ಇತ್ತೀಚೆಗೆ ಹೊಸ ಬಿರುದೊಂದು ಸಿಕ್ಕಿತು. ಮಾತಿನ ಮಲ್ಲ!
ಅಯ್ಯಯ್ಯೋ ಎಂದುಕೊಂಡರೂ, ನಿಜವೇ ಅಲ್ಲವಾ ಎಂದು ಕೂಡ ಅನ್ನಿಸಿತು. ಹೇಗಂತೀರಾ?
ನಾನು ಸ್ವಲ್ಪ ಮಾತು ಕಡಿಮೆಯವನಾಗಿದ್ದೆ ಹೊರಗಿನ ಜನರೊಂದಿಗೆ. ನನ್ನ ಮನೆಯವರು, ಕಸಿನ್ಸ್ ಬಳಿ ಬಾಯಿ ಮುಚ್ಚದೇ ಮಾತಾಡಿದ್ದು ಉಂಟು.
ಆದರೆ ಹೊರಗಿನ ಜನರೊಂದಿಗೆ ಏನೋ ಸಂಕೋಚ. ಮೊದಲ ಕೆಲಸವೇ ಸೇಲ್ಸ್ ಇಂಜಿನಿಯರ್ ಕೆಲಸ. ನನಗೇ ಗೊತ್ತಿರದಿದ್ದ ಉತ್ಪನ್ನಗಳ ಮಾರಾಟ. ಮಾರಲು ಎಷ್ಟು ಮಾತಿನ ಸರಕು ಬೇಕೋ ಅಷ್ಟು ಬಳಸುತ್ತಿದ್ದೆ!
ನಂತರ ತರಬೇತಿಯಲ್ಲಿ ಸಹಪಾಠಿಗಳೊಂದಿಗೆ ಒಂದಿಷ್ಟು ಮಾತು.
ನಂತರ ಬಂದಿತ್ತು ಅಗ್ನಿಪರೀಕ್ಷೆ. ನನ್ನ ಮೊದಲ ಕೆಲಸ ಸೇಲ್ಸ್ ಡಿಪಾರ್ಟ್‍ಮೆಂಟಿನಲ್ಲಿ!
ಉಳಿದವರನ್ನು ಗಮನಿಸುತ್ತಿದ್ದೆ. ನಂತರ ಮೆಲ್ಲನೆ ನನ್ನ ಸಂಕೋಚ ಓಡಿಹೋಯಿತು. ನನ್ನ ಪಾತ್ರ ಹೇಗಿತ್ತೆಂದರೆ ನಾನು ಕಾರ್ಖಾನೆಯ ಒಳಗೆ ಹೆಚ್ಚು ಕಡಿಮೆ ಎಲ್ಲ ಡಿಪಾರ್ಟ್‍ಮೆಂಟ್ ಜನರೊಂದಿಗೆ ಮಾತಾಡಬೇಕಿತ್ತು. ನನ್ನ ಡಿಪಾರ್ಟ್‍ಮೆಂಟ್ ಸಪ್ಲೈ ಮಾಡುತ್ತಿದ್ದ ಜನರೇಟರುಗಳ ಕಚ್ಚಾ ವಸ್ತುಗಳಿಂದ ಹಿಡಿದು ಅದು ಲಾರಿ ಹತ್ತುವವರೆಗೂ ಅದರ ಬಗ್ಗೆ ಫಾಲೋ ಅಪ್ ಮಾಡುವ ಪರಿಸ್ಥಿತಿ ಅನೇಕ ಸಲ ಬರುತ್ತಿತ್ತು. ದೊಡ್ಡವರು ಯಾವುದೋ ಅನ್‍ಪ್ರಾಕ್ಟಿಕಲ್ ಡೆಲಿವರಿ ಒಪ್ಪಿಕೊಂಡು ನಮ್ಮ ತಲೆಯ ಮೇಲೆ ಅದನ್ನು ಸಾಕಾರಗೊಳಿಸುವ ಕೆಲಸವನ್ನು ಹಾಕಿಬಿಡುತ್ತಿದ್ದರು.
ನನ್ನ ಅದೃಷ್ಟವೋ ಏನೋ, ಹೇಗೋ ಏನೋ ಎಲ್ಲಿ ಹೋದರೂ ಮಾತಾಡಿ ಗೆಲ್ಲುತ್ತಿದ್ದೆ. ವರ್ಕಿಂಗ್ ಬ್ಯಾಕ್‍ವಡ್ರ್ಸ್ ಎನ್ನುವ ಹಾಗೆ ಯಾವತ್ತು ಆ ವಸ್ತು ಹೊರಗೆ ಹೋಗಬೇಕೋ ನೋಡಿಕೊಂಡು ಅದನ್ನು ತಯಾರಿಸಲು ಬೇಕಾದ ಎಲ್ಲ ತಯಾರಿಯನ್ನೂ ಮಾಡಬೇಕಿತ್ತು. ಪ್ರತಿಯೊಂದು ಡಿಪಾರ್ಟ್‍ಮೆಂಟಿನಿಂದ ಅದನ್ನು ‘ಪುಷ್’ ಮಾಡಿಸಬೇಕಿತ್ತು.
ಅದು ಹೊರಟರೆ ಓಕೆ. ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ಅದು ಹೊರಗೆ ಹೋಗಲಾಗಲಿಲ್ಲ ಎಂದಿಟ್ಟುಕೊಳ್ಳಿ, ಆಗ ಸುಳ್ಳಿನ ಸರಮಾಲೆಯನ್ನು ಪೋಣಿಸಬೇಕಿತ್ತು. ಅಬ್ಬಾ... ಯಮಯಾತನೆ ಅದು. ಒಂದು ಸುಳ್ಳು ಹೇಳಿದರೆ ಅದನ್ನು ನೆನಪಿಟ್ಟುಕೊಂಡು ಮತ್ತೆ ಹೇಳಬೇಕಾದ ದುಃಸ್ಥಿತಿ!
ಗಿಫ್ಟ್ ಆಫ್ ಗ್ಯಾಬ್ ಮತ್ತು ಗ್ಲಿಬ್ ಟಂಗ್ ಎನ್ನುವ ಪದಗಳ ಅರ್ಥ ಗೊತ್ತಿರಲಿಲ್ಲ ಆಗ. ಆದರೆ ಅವೆರಡನ್ನೂ ಯಶಸ್ವಿಯಾಗಿ ಮಾಡುತ್ತಿದ್ದೆ (ಅಂತೆ!)
ಸಮಯಕ್ಕೆ ಸರಿಯಾಗಿ ಟಕ್ಕನೆ ಏನೋ ಒಂದು ಹೇಳುವುದು (ಸತ್ಯದ ತಲೆ ಮೇಲೆ ಹೊಡೆದಂತಹ ಸುಳ್ಳು) ಮತ್ತು ಇಡೀ ಕಥೆಯನ್ನು ಬಿಲ್ಡ್ ಮಾಡುವುದು. (ಅದು ನನಗೆ ಕಾದಂಬರಿ ಬರೆಯುವುದಕ್ಕೆ ಸಹಾಯ ಮಾಡಿರಬಹುದು ಕೂಡ!)
ಕಸ್ಟಮರುಗಳ ಬಳಿ ಸುಳ್ಳು ಹೇಳುವುದು ಬಹಳ ಕಷ್ಟ. ಏಕೆಂದರೆ ಅವರೇನೂ ಕಿವಿಯ ಮೇಲೆ ಹೂವು ಇಟ್ಟುಕೊಂಡಿರುವುದಿಲ್ಲ. ನಾನು ಇಲ್ಲ, ಆಗಲ್ಲ, ಈಗಲ್ಲ ಎಂದರೆ ಅವರು ನನ್ನ ಬಾಸ್‍ಗೆ ಧಾರಾಳವಾಗಿ ಫೋನ್ ಮಾಡಿ ಅದನ್ನು ಪರೀಕ್ಷಿಸುತ್ತಿದ್ದರು. ಅಂದರೆ ಬಾಸ್‍ನ ಕೂಡ ನಮ್ಮ ಸುಳ್ಳಿನ ಕಂತೆಯೊಳಗೆ ಸೇರಿಸಿಕೊಳ್ಳಬೇಕು!
ನಿಜಕ್ಕೂ ಎಂತೆಂತಹ ಎಸ್ಕಪೇಡುಗಳನ್ನು ಅನುಭವಿಸಿರುವೆನೋ... ನೆನಪಾದಂತೆ ಬರೆಯುವೆ. ನಿಮಗೆ ಮಜಾ ಬರುತ್ತದೆ. ನನ್ನ ಪರಿಸ್ಥಿತಿಯನ್ನು  ಕಂಡು ನೀವು ಮರುಗಬಹುದು ಕೂಡ...

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102